ಸಂಘ, ಸಂಸ್ಥೆಗಳು ಸರ್ವರ ಏಳ್ಗೆಗೆ ಶ್ರಮಿಸುವ ಕೆಲಸ ಮಾಡಬೇಕುಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸಂಘ, ಸಂಸ್ಥೆಗಳು ಎಲ್ಲರನ್ನೂ ಸೇರಿಸಿಕೊಂಡು ಸರ್ವರ ಏಳ್ಗೆಗೆ ಶ್ರಮಿಸುವ ಕೆಲಸ ಮಾಡಬೇಕು ಎಂದು ದೇವಿಕಾ ಸುಬ್ಬರಾವ್ ಫೌಂಡೇಶನ್ ಅಧ್ಯಕ್ಷೆ, ಸಮಾಜ ಸೇವಕಿ ಪಲ್ಲವಿ ನಾಡಗೌಡ ಹೇಳಿದರು. ಪಟ್ಟಣದ ಟಾಪ್ ಇನ್ ಟೌನ್ ಹಾಲ್‌ನಲ್ಲಿ ಪ್ರಗತಿ ಜೆಸಿ ಸಂಸ್ಥೆಯ 2024-25ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಮುಖಿ ಕೆಲಸಗಳು ಮತ್ತು ಪಾರದರ್ಶಕತೆ ಸಂಘ ಸಂಸ್ಥೆಗಳ ಮೇಲಿನ ನಂಬಿಕೆಗೆ ಮುಖ್ಯ ಕಾರಣವಾಗುತ್ತವೆ