ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಕ್ಕೆ ಜಿಪಂ ಸಿಇಒ ಭೇಟಿಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ವಿಜಯಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರದಲ್ಲಿ ಒದಗಿಸುತ್ತಿರುವ ಆಪ್ತ ಸಮಾಲೋಚನೆ ಹಾಗೂ ಸಲಹೆಗಳ ಕುರಿತು ಅವರು ಖುದ್ದಾಗಿ ಪರಿಶೀಲಿಸಿ, ದಾಖಲಾಗಿರುವ ಪ್ರಕರಣಗಳ ಪ್ರತ್ಯೇಕ ಕಡತ, ದೂರವಾಣಿ ಕರೆಗಳ ವಹಿ, ಸಂದರ್ಶಕರ ವಹಿ, ಆಪ್ತ ಸಮಾಲೋಚನಾ ದಾಖಲಾತಿ, ಕೇಂದ್ರದ ಮಾಸಿಕ ಪ್ರಗತಿ ವರದಿ, ಪ್ರಕರಣಗಳ ದಾಖಲಾತಿ ಪುಸ್ತಕ, ಸಿಬ್ಬಂದಿ ಹಾಜರಾತಿ ಪುಸ್ತಕ ಹಲವಾರು ದಾಖಲೆಗಳನ್ನು ಪರಿಶೀಲಿಸಿದರು.