ವಿಜಯಪುರ ಜಿಲ್ಲೆಗೆ ಒಲಿಯುತ್ತಾ ಎಂಎಲ್ಸಿ ಸ್ಥಾನ?ಕೆಳಮನೆಯಲ್ಲಿ ಟಿಕೆಟ್ ಸಿಗದವರು ಇದೀಗ ಮೇಲ್ಮನೆಯಲ್ಲಾದ್ರೂ ಅವಕಾಶ ಸಿಗಬಹುದು ಎಂದು ರಾಜ್ಯ ಹಾಗೂ ರಾಷ್ಟ್ರ ನಾಯಕರ ಮನೆಗೆ ಅಲೆದಾಡುತ್ತಿದ್ದು, ಲಾಬಿ ಆರಂಭಿಸಿದ್ದಾರೆ. ಜೂ.13ರಂದು ನಡೆಯಲಿರುವ 11 ಎಂಎಲ್ಸಿ ಸ್ಥಾನಗಳ ಚುನಾವಣೆಯಲ್ಲಿ ವಿಧಾನಸಭೆಯ ಶಾಸಕರು ಆಯ್ಕೆ ಮಾಡುವ ಅವಕಾಶ ಹೊಂದಿದ್ದರಿಂದ ಸುಮಾರು 7 ಸ್ಥಾನಗಳು ಕಾಂಗ್ರೆಸ್ ಹಾಗೂ 3 ಸ್ಥಾನಗಳು ಬಿಜೆಪಿ ಪಾಲಾಗಲಿವೆ ಎಂಬ ಲೆಕ್ಕಾಚಾರಗಳು ಪಕ್ಕಾ ಆಗಿವೆ. ಅದರಂತೆ ಈ ಬಾರಿ ವಿಜಯಪುರಕ್ಕೊಂದು ಸ್ಥಾನ ಕೊಡಲೇಬೇಕು ಎಂಬ ಕೂಗು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಾಳೆಯದಲ್ಲಿ ಕೇಳಿಬರುತ್ತಿದೆ.