ಮೆರವಣಿಗೆಯೊಂದಿಗೆ ಗಣೇಶನಿಗೆ ಅದ್ಧೂರಿ ಸ್ವಾಗತನಗರದಲ್ಲಿ ವಿಜೃಂಭಣೆಯಿಂದ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಮುಖ ಬಡಾವಣೆಗಳಲ್ಲಿ ಗಣೇಶನ ಮೆರವಣಿಗೆ ಅದ್ಧೂರಿಯಿಂದ ನಡೆದಿದ್ದು, ಒಂದೊಂದು ಏರಿಯಾದಲ್ಲಿ ಒಂದೊಂದು ತರಹದಲ್ಲಿ ಆಚರಣೆ ಮಾಡಲಾಗುತ್ತಿದೆ. ಕೆಲವರು ಟ್ರ್ಯಾಕ್ಟರ್‌ನಲ್ಲಿ, ಇನ್ನು ಕೆಲವರು ಟಂಟಂ ಗಳಲ್ಲಿ ಗಣೇಶನನ್ನು ಮೆರವಣಿಗೆ ಮಾಡಿ ಪ್ರತಿಷ್ಠಾಪಿಸಿದರೇ ನಗರಕ್ಕೆ ಬಂದ ಎತ್ತಿನ ಬಂಡಿಯಲ್ಲಿ ಗಣೇಶನನ್ನು ಒಯ್ದು ಪ್ರತಿಷ್ಠಾಪಿಸಿರುವುದು ವಿಶೇಷವಾಗಿ ಕಂಡು ಬಂದಿತು.