ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಮೈತ್ರಿಗೆ ಗೆಲುವುಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ತೀವ್ರ ಕುತೂಹಲ ಕೆರಳಿಸಿದ್ದ ಪಟ್ಟಣ ಪಂಚಾಯತಿಯ ಮೊದಲ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಜಯಶ್ರೀ ದೇವಣಗಾಂವ ಹಾಗೂ ಉಪಾಧ್ಯಕ್ಷರಾಗಿ ರಮೇಶ ಮಸಿಬಿನಾಳ ಆಯ್ಕೆಯಾದರು. ಒಟ್ಟು 17 ಜನ ಸದಸ್ಯರ ಬಲ ಹೊಂದಿರುವ ಪಪಂಯಲ್ಲಿ ಕಾಂಗ್ರೆಸ್ -07, ಬಿಜೆಪಿ-04, ಜೆಡಿಎಸ್ -04 ಹಾಗೂ ಪಕ್ಷೇತರ-02 ಸದಸ್ಯರಿದ್ದರು.