ಬದುಕು ಕೃಷ್ಣಾರ್ಪಣವಾದರೂ ಮುಗಿದಿಲ್ಲ ಸಂತ್ರಸ್ತರ ಗೋಳುಕನ್ನಡಪ್ರಭ ವಾರ್ತೆ ವಿಜಯಪುರನಾಲ್ಕು ರಾಜ್ಯಗಳ ಜಲಧಾರೆ, ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣೆಗಾಗಿ ಜೀವನವನ್ನೇ ಅರ್ಪಿಸಿದವರು ಇಂದಿಗೂ ಸಂಕಷ್ಟದಲ್ಲೇ ಇದ್ದಾರೆ. ನಾಲ್ಕು ದಶಕಗಳ ಯೋಜನೆಯಲ್ಲಿ ಕಳೆದ ಎರಡು ದಶಕಗಳಿಂದ ಭರವಸೆಗಳನ್ನೇ ನಂಬಿಕೊಂಡು ಕುಳಿತಿರುವ ಅದೆಷ್ಟೋ ಜೀವಗಳು ಕೃಷ್ಣಾರ್ಪಣವಾಗಿದ್ದು, ಇನ್ನಷ್ಟು ಕುಟುಂಬಗಳು ಸರ್ಕಾರಗಳ ಹುಸಿ ಭರವಸೆಗಳನ್ನೇ ನಂಬಿ ಜೀವನ ಸಾಗಿಸುತ್ತಿವೆ.