ಸರ್ಕಾರಿ ಕಟ್ಟಡಗಳ, ಖಾಸಗಿ ವ್ಯಕ್ತಿಗಳ ಪಾಲಾದ ಸ್ಮಶಾನ ಜಾಗ!ಕನ್ನಡಪ್ರಭ ವಾರ್ತೆ ನಾಲತವಾಡ ಸ್ಮಶಾನ ಜಾಗ ಅತಿಕ್ರಮಣವಾದರೂ ಕಂದಾಯ ಇಲಾಖೆಯಾಗಲಿ, ಪಟ್ಟಣ ಪಂಚಾಯತಿ ಅಧಿಕಾರಿಗಳಾಗಲಿ ಯಾವುದೇ ಕ್ರಮ ವಹಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ಸುಮಾರು 6.21 ಎಕರೆ ಪ್ರದೇಶದ ಸ್ಮಶಾನ ಜಾಗದಲ್ಲಿ ಕೆಲವು ಸರ್ಕಾರಿ ಕಟ್ಟಡ ಇದ್ದರೇ, ಇನ್ನೂ ಕೆಲವು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದ್ದು ಸಂಪೂರ್ಣ ಅತಿಕ್ರಮಣವಾಗಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.