ಕೆಂಪೇಗೌಡರ ಆಡಳಿತ ಸ್ಮರಣೀಯನಾಡಿನಲ್ಲಿ ಮಹಾತ್ಮರ-ಶರಣರ-ಮಹನೀಯರ ಸಾಧನೆ, ತತ್ವ-ಸಂದೇಶಗಳು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಅವರ ಜಯಂತಿ ಕಾರ್ಯಕ್ರಮ, ಸ್ಮರಣೀಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ನಾಡಿನಲ್ಲಿ ಉತ್ತಮ ಆಡಳಿತ ನೀಡಿದ ಮಹನೀಯರಲ್ಲಿ ಒಬ್ಬರಾದ ನಾಡಪ್ರಭು ಕೆಂಪೇಗೌಡ ಅವರ ಆಡಳಿತ ಎಂದಿಗೂ ಮಾದರಿಯಾಗಿದೆ ಎಂದು ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ ಹೇಳಿದರು.