ಸರ್ಕಾರಿ ನೌಕರರಿಗೆ ಲಿಂಗರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಕನ್ನಡಪ್ರಭ ವಾರ್ತೆ ವಿಜಯಪುರ ಶಿರಸಂಗಿ ಲಿಂಗರಾಜ ಮಹಾರಾಜರ ತ್ಯಾಗ, ಶೈಕ್ಷಣಿಕ ಪ್ರೇಮ ಎಲ್ಲರಿಗೂ ದಾರಿದೀಪ ಎಂದು ಕವಲಗಿಯ ಅಭಿನವ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಹೇಳಿದರು. ನಗರದಲ್ಲಿನ ಮನಿಯಾರ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಲಿಂಗರಾಜ ಸಂಸ್ಥೆ, ವಿಜಯಪುರ ಜಿಲ್ಲಾ ಆದರ್ಶ ಶಿಕ್ಷಕರ ವೇದಿಕೆ ಹಾಗೂ ಬಸವನಬಾಗೇವಾಡಿ ಸಹಯೋಗದಲ್ಲಿ ಸರ್ಕಾರಿ ನೌಕರರಿಗಾಗಿ ಆಯೋಜಿಸಲಾಗಿದ್ದ ಶಿರಸಂಗಿ ಲಿಂಗರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ವೇಳೆ ಆಶೀವರ್ಚನ ನೀಡಿದರು.