ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಶಿಕ್ಷಕರ ಪರದಾಟಸಮಗ್ರ ಶಿಕ್ಷಣ ಕರ್ನಾಟಕ ಅಭಿಯಾನ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೂತನ ತಾಲೂಕುಗಳಲ್ಲಿನ ಆರ್ಎಂಎಸ್ಎ (ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ) ಪ್ರೌಢ ಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿ ಆಗಿಲ್ಲ. ರಾಜ್ಯಾದ್ಯಂತ ರಚನೆಯಾಗಿರುವ ನೂತನ ತಾಲೂಕುಗಳಲ್ಲಿ ಕೆಲವು ಕಡೆ ಡಿಡಿಒ ಕೋಡ್ ಮ್ಯಾಪಿಂಗ್ ಆಗದಿರುವುದರಿಂದ 2024-25ನೇ ಸಾಲಿನಲ್ಲಿ ಈ ಸಮಸ್ಯೆ ಎದುರಾಗಿದೆ. ಹಳೆ ತಾಲೂಕುಗಳಲ್ಲಿ ಆಗುತ್ತಿದ್ದ ಸಂಬಳದ ಲಿಸ್ಟ್ನಿಂದ ಹೊರ ತೆಗೆಯಲಾಗಿದ್ದು, ಹೊಸ ಡಿಡಿಒ ಕೋಡ್ನಲ್ಲಿ ಸೇರ್ಪಡೆ ಆಗದಿರುವುದರಿಂದ ಹಲವಾರು ಶಿಕ್ಷಕರು ಸಂಬಳಕ್ಕಾಗಿ ಪರದಾಡುತ್ತಿದ್ದಾರೆ.