ಎಚ್ಚೆತ್ತ ಸಿಬ್ಬಂದಿ, ಡೆಂಘೀ ಜ್ವರ ತಡೆಗೆ ಜಾಗೃತಿಕನ್ನಡಪ್ರಭ ವಾರ್ತೆ ವಿಜಯಪುರ ಮಳೆಗಾಲ ಆರಂಭವಾಗಿದ್ದು, ದಿನೆ ದಿನೆ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರು ಆತಂಕದಲ್ಲಿದ್ದಾರೆ ಎಂದು ಜು.9ರಂದು ಕನ್ನಡಪ್ರಭ ವರದಿ ಪ್ರಕಟಿಸಿದ ಬೆನ್ನಲ್ಲೇ ಅಧಿಕಾರಿವರ್ಗ ಎಚ್ಚೆತ್ತುಕೊಂಡಿದೆ. ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಗಲ್ಲಿ ಗಲ್ಲಿಗಳಲ್ಲಿ ಜನರನ್ನು ಜಾಗೃತಿ ಮೂಡಿಸುವುದು ಹಾಗೂ ಡೆಂಘೀ ಬಗ್ಗೆ ತಿಳಿವಳಿಕೆ ಹೇಳುವ ಕಾರ್ಯ ಭರದಿಂದ ಸಾಗಿದೆ.