• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • vijayapura

vijayapura

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕೆರೆಗಳಲ್ಲಿ ಬಾವಿ, ಬೋರ್ ತೋಡಿದರೆ ಕ್ರಿಮಿನಲ್ ಕೇಸ್
ಇಂಡಿ: ಕೆರೆಗಳ ಪಕ್ಕದಲ್ಲಾಗಲಿ, ಕೆರೆಯಲ್ಲಾಗಲಿ ಬೋರ್‌ವೆಲ್ ಕೊರೆಸಿದರೆ ಹಾಗೂ ಬಾವಿ ತೋಡಿದರೆ ಅಂತವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿರುವ ಅವರು, ಈಗಾಗಲೆ 4 ಜನರ ಮೇಲೆ ಪ್ರಕರಣ ದಾಖಲಿಸಿದ್ದು, 8 ಮೋಟಾರ್ ಪಂಪ್‌ಸೆಟ್‌ಗಳನ್ನು ವಶಕ್ಕೆ ಪಡೆದಿದ್ದು, ಒಂದು ಬೋರ್‌ವೆಲ್‌ ಅನ್ನು ನಾಶ ಮಾಡಲಾಗಿದೆ. ಇನ್ನು ಮುಂದೆ ಸಾರ್ವಜನಿಕರು ಕೆರೆಯ ಸುತ್ತಮುತ್ತ ಮತ್ತು ಕೆರೆಗಳಲ್ಲಾಗಲಿ ಬೋರ್‌ವೆಲ್‌ ಇಲ್ಲವೆ ಬಾವಿ ತೋಡಿದರೆ ಕಾನೂನು ಕ್ರಮ ಕೈಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಮುಸ್ಲಿಮರ ಗುರು ಇದ್ದಂತೆ
ವಿಜಯಪುರ ನಮ್ಮ ಜೊತೆಗೆ ನಿಮಗೆ ಇರೋಕಾಗದಿದ್ರೆ ಅಂತವರೆಲ್ಲ ಪಾಕಿಸ್ತಾನಕ್ಕೆ ಹೋಗಲಿ. ಸಿದ್ದರಾಮಯ್ಯ ಮುಸ್ಲಿಮರ ಗುರು ಇದ್ದಂತೆ, ಸಿದ್ದರಾಮಯ್ಯ ಮುಸ್ಲಿಮರಿಗೆ ₹10 ಸಾವಿರ ಕೋಟಿ ಕೊಡ್ತೀನಿ ಅಂದ್ರು, ಯಾಕಪ್ಪ ಕೊಡ್ತೀರಿ, ಮಸೀದಿಗಳಲ್ಲಿ ಅನ್ನ ದಾಸೋಹ ನೋಡಿದ್ದೀರಾ? ಮಂದಿರ, ಮಠಗಳಲ್ಲಿ ಮಾತ್ರ ದಾಸೋಹ ನಡೆಯುತ್ತೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು. ನಗರದ ಶಿವಾಜಿ ವೃತ್ತದಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯತ್ನಾಳ ಮಾತನಾಡಿದರು.
ಮುಳಸಾವಳಗಿಯಲ್ಲಿ ಜೋಡೆತ್ತು ಬಂಡಿಗಳ ನಂದಿ ಯಾತ್ರೆಗೆ ಸ್ವಾಗತ
ದೇವರಹಿಪ್ಪರಗಿ: ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಎತ್ತುಗಳ ಹಾಗೂ ಮಣ್ಣಿನ ಮಹತ್ವ ಸಾರುವ ಉದ್ದೇಶದಿಂದ ಗುರುವಿಗಾಗಿ ನಡೆ ನಮನ ಸಂದೇಶದೊಂದಿಗೆ ಬಿಜ್ಜರಗಿಯಿಂದ ಆರಂಭವಾದ ಜೋಡೆತ್ತು ಬಂಡಿಗಳ ನಂದಿ ಯಾತ್ರೆಗೆ ಸ್ವಾಗತ ಕೋರಲಾಯಿತು. ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ ನೇತೃತ್ವದಲ್ಲಿ, ಗ್ರಾಮದ ರೈತರು 15 ಜೋಡೆತ್ತು ಬಂಡಿಗಳಲ್ಲಿ ಸಿದ್ಧೇಶ್ವರ ಸ್ವಾಮೀಜಿಯ ಭಾವಚಿತ್ರವನ್ನು ಬಿಜ್ಜರಗಿಯ ರೈತರು ಸಿಂದಗಿ ತಾಲೂಕಿನ ಹರನಾಳ ಗ್ರಾಮದ ನಂದಿ ಯಾತ್ರೆಗೆ ಸ್ವಾಗತ ಕೋರಿದರು.
ವಕ್ಫ್ ಕಮೀಟಿ ನೂತನ ಸದಸ್ಯರಿಗೆ ಗೌರವ ಸನ್ಮಾನ
ವಿಜಯಪುರ: ನಗರದ ಮನಗೂಳಿ ಅಗಸಿ ಹತ್ತಿರದ ಫತ್ಹೇ ದರವಾಜಾ ಮಸೀದಿ ಜಮಾತ್ ವತಿಯಿಂದ ವಕ್ಫ್ ಸಲಹಾ ಸಮಿತಿ ನೂತನ ಪದಾಧಿಕಾರಿಗಳು ಹಾಗೂ ಚಿನ್ನದ ಪದಕ ಪಡೆದ ಸಾಧಕರಿಗೆ ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆಯ ಆಯುಕ್ತ ಬಿ.ಎ.ಸೌದಾಗರ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ಎಲ್ಲ ಕಡೆ ಶಿಕ್ಷಣವಂತರಿಗೆ ಮಾತ್ರ ಬೆಲೆಯಿದ್ದು, ಪ್ರತಿಯೊಬ್ಬರೂ ಉತ್ತಮ ಶಿಕ್ಷಣವಂತರಾಗಿ ಸಮಾಜಮುಖಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಲಿಂ.ಮರುಳಾರಾಧ್ಯ ಶಿವಾಚಾರ್ಯರ ಪುಣ್ಯಸ್ಮರಣೋತ್ಸ
ಸಿಂದಗಿ: ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಹಿರೇಮಠದ ಶತಾಯುಷಿ ಲಿಂ.ಮರುಳಾರಾಧ್ಯ ಶಿವಾಚಾರ್ಯರ 4 ನೇ ಪುಣ್ಯಸ್ಮರಣೋತ್ಸವದ ನಿಮಿತ್ಯ ಲಿಂ.ಶ್ರೀಗಳ ಮೂರ್ತಿಯ ಪಲ್ಲಕ್ಕಿ ಮೆರವಣಿಗೆಯನ್ನು ನಡೆಸಲಾಯಿತು. ಮಂಗಳವಾರ ನಸುಕಿನ ಜಾವ ಶ್ರೀಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀಮಠದ ಪೀಠಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯರು ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಬೆಳಗ್ಗೆ 10 ಗಂಟೆಗೆ ಲಿಂ. ಶ್ರೀಗಳ ಪಲ್ಲಕ್ಕಿ ಉತ್ಸವ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ್ದು, ಭಕ್ತರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಕನ್ನೊಳ್ಳಿ, ಕೊಕಟನೂರ, ಬಂದಾಳ, ಬೂದಿಹಾಳ, ಚಿಕ್ಕ ಸಿಂದಗಿ ಸೇರಿದಂತೆ ಅನೇಕ ಗ್ರಾಮಗಳ ಸಾವಿರಾರು ಭಕ್ತರು ಶ್ರೀಗಳ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದರು.
ತಾಳಿಕೋಟೆಯಲ್ಲಿ ಬಿಎಲ್‌ಡಿ ಸೌಹಾರ್ದ ಶಾಖೆ ಉದ್ಘಾಟನೆ
ತಾಳಿಕೋಟೆ: ವಿಜಯಪುರ ಲಿಂಗಾಯತ ಡೆವೆಲ್ಪಮೆಂಟ್ ಸೌಹಾರ್ದ ಸಹಕಾರಿ ಸಂಘ ಗ್ರಾಹಕರ ವಿಸ್ವಾಸಗಳಿಸುವದರೊಂದಿಗೆ ಮುನ್ನಡೆದ ಸಂಸ್ಥೆಯ 8ನೇ ಶಾಖೆಯನ್ನು ತಾಳಿಕೋಟೆ ಪಟ್ಟಣದಲ್ಲಿ ಉದ್ಘಾಟಿಸಿದ್ದು, ಸಂತಸತಂದಿದೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.
ಸಮಸ್ಯೆ ಬಗೆಹರಿಸುವಂತೆ ಗ್ರಂಥಾಲಯ ಮೇಲ್ವಿಚಾರಕರಿಂದ ಸಿಇಒಗೆ ಮನವಿ
ವಿಜಯಪುರ: ಜಿಲ್ಲೆಯಲ್ಲಿ ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರ ಸಂಘದ ವತಿಯಿಂದ ಬೇಡಿಕೆಗಳು, ಕುಂದು ಕೊರತೆಗಳನ್ನು ಈಡೇರಿಸುವಂತೆ ಜಿಪಂ ಸಿಇಓ ರಿಷಿ ಆನಂದ್ ಅವರಿಗೆ ಮನವಿ ಸಲ್ಲಿಸಿದರು. 2020ರ ನಿಂದ ಇಲ್ಲಿವರೆಗೆ ಬಹುತೇಕ ಕಡೆಗೆ ಗ್ರಂಥಾಲಯಗಳ ಪತ್ರಿಕೆ ಬಿಲ್ ನೀಡದಿರುವುದು, 6 ತಿಂಗಳಿನಿಂದ ವೇತನ ಜಮೆ ಇದ್ದರೂ ನೀಡದಿರುವುದು, ಇ-ಅಟೆಂಡೆನ್ ಮಾಡುವಲ್ಲಿ ಮುತುವರ್ಜಿ ವಹಿಸದಿರುವುದ, ಗ್ರಂಥಾಲಯಗಳಿಗೆ ಅವಶ್ಯಕ ರಜಿಸ್ಟರ್, ರಶೀದಿ ಪುಸ್ತಕ, ಸೀಲು, ಕುರ್ಚಿ, ಪೀಠೋಪಕರಣ, ಡಿಜಿಟಲ್ ಗ್ರಂಥಾಲಯ ಗಳಿಗೆ ಅವಶ್ಯಕ ಪರಿಕರಗಳು, ವೈಫೈ, ಇಂಟರ್ನೆಟ್ ಕಲ್ಪಿಸುವದು, ವರ್ಗಾವಣೆ, ಅನುಕಂಪದ ನೌಕರಿ ಸೇರಿದಂತೆ ಅನೇಕ ವಿಷಯಗಳ ಕುರಿತು ಸಿಇಒ ಅವರಿಗೆ ಮನವಿಯ ಮೂಲಕ ಗಮನಕ್ಕೆ ತರಲಾಯಿತು. ಮನವಿ ಸ್ವೀಕರಿಸಿ ಕೂಡಲೆ ತಮ್ಮ ಸಮಸ್ಯೆಗಳನ್ನು ಪರಿಹರಿಸುವದಾಗಿ ಸಿಇಒ ಭರವಸೆ ನೀಡಿದರು.
ಪುರಸಭೆ ಕಚೇರಿಗೆ ಲೋಕಾ ಅಧಿಕಾರಿಗಳ ದಿಢೀರ ಭೇಟಿ: ತರಾಟೆ
ಸಿಂದಗಿ: ಸಿಂದಗಿ ಪುರಸಭೆಯಲ್ಲಿ ಲೋಪದೋಷಗಳು ಹೆಚ್ಚಾಗಿವೆ ಎಂದು ದೂರುಗಳು ಬಂದ ಹಿನ್ನಲೆಯಲ್ಲಿ ಪುರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ದೂರುಗಳ ಆಧಾರದ ಮೇಲೆ ದಾಳಿ ನಡೆಸಿದಾಗ ಜಿಲ್ಲಾದ್ಯಂತ ಎಲ್ಲ ಸರಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳ ಬಗ್ಗೆ ನಿಗಾ ಇಡಬೇಕೆನ್ನುವ ಆದೇಶವಿರುವುದಾಗಿ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ಹೇಳಿದರು.
ಗ್ರಾಫಿಕ್ ಡಿಸೈನ್ ಕ್ಷೇತ್ರದಲ್ಲಿ ವಿಫುಲ ಅವಕಾಶ: ಶಂಕರ್‌ಗೌಡ
ವಿಜಯಪುರ: ಗ್ರಾಫಿಕ್ ಡಿಸೈನ್ ಎನ್ನುವುದು ಪ್ರಸ್ತುತ ದಿನಗಳಲ್ಲಿ ಬಹುಬೇಡಿಕೆಯ ಕಲೆಯಾಗಿದ್ದು, ಈ ಕಾರ್ಯಾಗಾರದಲ್ಲಿ ಎಲ್ಲರು ಸಕ್ರಿಯವಾಗಿ ಭಾಗವಹಿಸುವ ಮೂಲ ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕುಲಸಚಿವ ಶಂಕರ್‌ಗೌಡ ಸೋಮನಾಳ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಅಹಲ್ಯಬಾಯಿ ಸಂಶೋಧನಾ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ನಡೆದ ಗ್ರಾಫಿಕ್ ಡಿಸೈನಿಂಗ್ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಕೈಲಾಸನಾಥ ಶ್ರೀಗೆ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಕೊಲ್ಹಾರ: ಡಾ.ಪಂಡಿತ ಪುಟ್ಟರಾಜ ಗವಾಯಿಗಳ 110 ನೇ ಜಯಂತ್ಯುತ್ಸವದ ಪ್ರಯುಕ್ತ ನೀಡುವ ಗುರು ಪುಟ್ಟರಾಜ ಗವಾಯಿಗಳ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಶೀಲವಂತ ಹಿರೇಮಠದ ಘ.ಮ.ಪೂ ಧರ್ಮರತ್ನ ಡಾ.ಕೈಲಾಸನಾಥ ಮಹಾಸ್ವಾಮೀಜಿ ಭಾಜನರಾದರು. ಗದಗಿನ ಶ್ರೀರಾಮ ಭವನ ಕಳಸಾಪೂರದಲ್ಲಿ ಡಾ.ವಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಸಹಯೋಗದಲ್ಲಿ ನಡೆದ ಗುರು ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವದ ಸಮಾರಂಭದಲ್ಲಿ 2024 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಯನ್ನು ಪಟ್ಟಣದ ಶೀಲವಂತ ಹಿರೇಮಠದ ಘ.ಮ.ಪೂ ಧರ್ಮರತ್ನ ಡಾ.ಕೈಲಾಸನಾಥ ಸ್ವಾಮೀಜಿ ಪ್ರದಾನ ಮಾಡಲಾಯಿತು.
  • < previous
  • 1
  • ...
  • 309
  • 310
  • 311
  • 312
  • 313
  • 314
  • 315
  • 316
  • 317
  • ...
  • 377
  • next >
Top Stories
ಪ್ರಜ್ವಲ್‌ ಕೈದಿ ನಂ.15528 - ಮಾಜಿ ಎಂಪಿಗೆ 8 ತಾಸು ದುಡಿದರೆ ₹525 ವೇತನ!
ಕೆಆರೆಸ್‌ಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್‌: ಮಹದೇವಪ್ಪ
ಮುಂಗಾರು 2ನೇ ಅವಧೀಲಿ 80%ವರೆಗೂ ಮಳೆ ಕೊರತೆ
ಧರ್ಮಸ್ಥಳ ಗ್ರಾಮ ಕೇಸ್‌ : ಶವ ಪತ್ತೆಗೆ ರಾಡಾರ್‌?
ಒಳಮೀಸಲು ಸಮೀಕ್ಷಾ ವರದಿ ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved