ಹುಣಶ್ಯಾಳದಲ್ಲಿ ಗ್ರಾಮದೇವತೆಯ ಅದ್ಧೂರಿ ಜಾತ್ರೆದೇವರಹಿಪ್ಪರಗಿ: ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮೂಲ ದೇವಸ್ಥಾನದಿಂದ ಬೆಳಗ್ಗೆ ಗಂಗಾ ಸ್ಥಾನ ಮುಗಿಸಿ ಗ್ರಾಮದೇವತೆಗೆ ಎತ್ತಿನ ಬಂಡಿಯಲ್ಲಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ, ರಥದಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಗ್ರಾಮ ದೇವತೆಯನ್ನು ಹೊತ್ತ ರಥ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದಿದ್ದು, ಗ್ರಾಮದ ಪ್ರಮುಖರು, ಕುಂಭ ಹೊತ್ತು ಮಹಿಳೆಯರು, ಗ್ರಾಮದೇವತೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಭಕ್ತರು ಗ್ರಾಮದೇವತೆ ರಥೋತ್ಸವವಕ್ಕೆ ಚಾಲನೆ ನೀಡಿದರು.