ಜಾನಪದ ಮಾನವ ಜನಾಂಗದ ಮೂಲ ಸಂಸ್ಕೃತಿ: ಚಿಕ್ಕಮಠಮುದ್ದೇಬಿಹಾಳ: ಜಾನಪದ ಮಾನವ ಜನಾಂಗದ ಮೂಲ ಸಂಸ್ಕೃತಿ. ಕಾಡು ಮಾನವರು ನಾಡಿಗೆ ಬಂದು ಸಂಘಟಿತರಾಗಿ ಬದುಕಿಗಾಗಿ ಒಳ್ಳೆಯ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯ, ಮನೋರಂಜನೆ ರೂಢಿಸಿಕೊಂಡು ಜೀವನ ಪ್ರಾರಂಭಿಸಿದರು. ಈ ಎಲ್ಲ ಪದ್ದತಿಗಳು ಜಾನಪದ ಸಂಸ್ಕೃತಿಯಾಗಿ ಇಂದು ನಮ್ಮ ಬದುಕಿಗೆ ದಾರಿ ದೀಪವಾಗಿವೆ ಎಂದು ಎಂಜಿವ್ಹಿಸಿ ಬಿಇಡಿ ಕಾಲೇಜ ಪ್ರಾಚಾರ್ಯ ಡಾ.ಆರ್.ಜಿ.ಚಿಕ್ಕಮಠ ಅಭಿಪ್ರಾಯಪಟ್ಟರು.