ಪ್ರಯಾಣಿಕರ ಸುರಕ್ಷತೆಯೇ ಚಾಲಕರ ಮೂಲ ಕರ್ತವ್ಯ: ಪರಮೇಶ್ವರ ಕವಟಗಿವಿಜಯಪುರ: ಸಮಯ ಪ್ರಜ್ಞೆ, ಸಂಚಾರಿ ನಿಯಮ ಪಾಲನೆ, ಪ್ರಯಾಣಿಕರ ಸುರಕ್ಷತೆಗಳನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸುವವನೇ ಉತ್ತಮ ಚಾಲಕ ಎಂದು ಗಾಂಧಿಚೌಕ ಸಂಚಾರಿ ಠಾಣೆಯ ವೃತ್ತ ಪೊಲೀಸ್ ನಿರೀಕ್ಷಕ ಪರಮೇಶ್ವರ ಕವಟಗಿ ಹೇಳಿದರು. ನಗರದ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಹಾಗೂ ವಿಜಯಪುರ ಸಂಚಾರಿ ಪೊಲೀಸ್ ಠಾಣೆ ಆಶ್ರಯದಲ್ಲಿ ವಾಹನ ಚಾಲಕರಿಗಾಗಿ ನಡೆದ ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.