ಇಂಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಕರವೇ ಪ್ರತಿಭಟನೆಈಗಾಗಲೇ ಇಂಡಿಯಲ್ಲಿ ಕಂದಾಯ ಉಪವಿಭಾಗ ಕಾರ್ಯಾಲಯವಿದ್ದು, ಬಹುತೇಕ ಜಿಲ್ಲಾಮಟ್ಟದ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಸಾರಿಗೆ ವ್ಯವಸ್ಥೆಗಾಗಿ ಎರಡು ಹೆದ್ದಾರಿಗಳು, ರೈಲು ನಿಲ್ದಾಣ ಸಹ ಇದೆ. ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಚಡಚಣ ತಾಲೂಕು ಮಧ್ಯಭಾಗದಲ್ಲಿ ಇಂಡಿ ಇರುವ ಕಾರಣ ಎಲ್ಲ ತಾಲೂಕಿನವರಿಗೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ಹೋಗಲು ಅನುಕೂಲವಾಗಲಿದೆ