ಮನುಷ್ಯರೇ ಸಾಯ್ಲಿಕತ್ತೀವಿ, ಪ್ರಾಣಿ ಪಕ್ಷಿಗಳು ಬದುಕ್ತಾವೇನ್!? "ಮೊದಲಿನ್ಹಾಂಗ ಹಕ್ಕಿಗಳ ಹಾರೋದು, ನವಿಲುಗಳು ಕುಣಿಯೋದು, ಜಿಂಕೆಗಳು ಜಿಗಿಯೋದು ಭಾಳ್ ಅಂದ್ರ ಭಾಳ್ ಕಮ್ಮೀಯಾಗೇದ್ರಿ.. ಈ ಹಿಂದೆ ಜಿಂಕಿ ಹಿಂಡುಗಳು ಬಂದ್ ಒಂದ್ ದಿವಸ್ದಾಗ ನಾಲ್ಕು ಎಕರೆ ಹೊಲದಾಗ ಬೆಳೆದಿದ್ದ ಬೆಳೀ ತಿಂದ್ ಹೋಗ್ತಿದ್ವು... ಈಗ ನೋಡಿದರೆ, ಒಂದು ಎಕರೆ ಬೆಳೀ ತಿನ್ನೋದನ್ನೂ ನಾವು ಕಾಣಾವಲ್ವಿ..! " ಕೆಮಿಕಲ್ ಕಂಪನಿಗಳು ಬಿಡೋ ಹೊಲಸಿಗೆ ಸಂಬಂಧಿಸಿದಂತೆ ಸಂಗ್ವಾರ ಗ್ರಾಮದ ಬಾಲಪ್ಪ ಹಾಗೂ ಮರೆಪ್ಪರ ಮಾತುಗಳಿವು.