ಮಾರ್ಚ್ 1ರಂದು ಯಾದಗಿರಿ ನಗರಸಭೆ ಹೊಸ ಕಟ್ಟಡದಲ್ಲಿ ಬಜೆಟ್ ಸಭೆಮಾ.1 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅಧ್ಯಕ್ಷತೆಯಲ್ಲಿ, ನಗರಸಭೆಯ ಸದಸ್ಯರ ಸಾಮಾನ್ಯ ಸಭೆ ಹಾಗೂ ಬಜೆಟ್ ಸಭೆ ಆಯೋಜಿಸಲಾಗಿದೆ. ವಿಶೇಷವೆಂದರೆ, ದಶಕಗಳಷ್ಟು ಹಳೆಯದಾಗಿದ್ದ ನಗರಸಭೆ ಕಚೇರಿ ಕಟ್ಟಡ ಧ್ವಂಸಗೊಳಿಸಿ, ಅದೇ ಸ್ಥಳದಲ್ಲಿ 5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಹಾಗೂ ಸುಸಜ್ಜಿತ ನಗರಸಭೆಯ ನೂತನ ಕಟ್ಟಡದಲ್ಲಿ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.