ದೊಡ್ಡಗುಣದ ಕೃಷ್ಣ: ವಿಶ್ವನಾಥ್ ಸ್ಮರಣೆತಾವು ಬರೆದ ಆತ್ಮಕತೆ ‘ಹಳ್ಳಿ ಹಕ್ಕಿ’ ಪುಸ್ತಕದಲ್ಲಿ ಎಸ್.ಎಂ. ಕೃಷ್ಣ ಅವರು ಬಿ.ಸರೋಜಾದೇವಿ ಅವರ ಜೊತೆಗಿನ ಪ್ರಣಯ ಪ್ರಸಂಗವನ್ನು ಉಲ್ಲೇಖಿಸಿದ್ದು, ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಆಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್.ಎಂ. ಕೃಷ್ಣ ಅವರಿಗೆ ದೂರವಾಣಿ ಮಾಡಿ ಬೇಸರವಾಯಿತೇ ಎಂದು ಕೇಳಿದೆ, ಆಗ ಎಸ್.ಎಂ. ಕೃಷ್ಣ ಅವರು ನೀವು ಬರೆದಿರುವುದು ವಾಸ್ತವ, ಆದರೆ ಇನ್ನಷ್ಟು ಚನ್ನಾಗಿ ಬರೆಯಬಹುದಿತ್ತು ಎಂದರು, ಅಂತಹ ದೊಡ್ಡ ಗುಣ ಕೃಷ್ಣ ಅವರದ್ದಾಗಿತ್ತು ಎಂದು ಬಿಜೆಪಿ ಹಿರಿಯ ಸದಸ್ಯ ಎಚ್. ವಿಶ್ವನಾಥ್ ಸ್ಮರಿಸಿಕೊಂಡರು.