ಸುಮ್ಮನೇ ಅಂದರೆ ಸುಮ್ಮನೇ…ಗಿಡವೊಂದರ ಎಲೆಯ ಹಾಗೆ. ಚಿಗುರುವ ಸಂಭ್ರಮ, ಉದುರುವ ಬೇಸರ ಯಾವುದೂ ಇಲ್ಲದ ಹಾಗೆ ಇರಬೇಕು. ಒಂಟಿತನವೆಂದರೆ ಕಾಲಸತ್ಯವನ್ನು ಒಪ್ಪಿಕೊಳ್ಳುವಂತೆ ಮಾಡುವ, ನಿರ್ಮಮಕಾರದ ಸ್ಥಿತಿ ಗೊಯ್ದುಬಿಡುವ ಮಾರ್ಗ. ಅದು ರೋಗವಲ್ಲ, ಶಾಪವಂತೂ ಅಲ್ಲವೇ ಅಲ್ಲ.
ಪಶ್ಚಿಮ ಘಟ್ಟದ ಜೀವಜಾಲ ಎಮರ್ಜೆನ್ಸಿ ವಾರ್ಡಿನಲ್ಲಿದೆ, ತುರ್ತು ಸಂದೇಶಗಳು ಹೊರಬಿದ್ದಿವೆ, ತಮ್ಮದಲ್ಲದ ತಪ್ಪಿಗೆ ಅಮಾಯಕ ಜೀವಗಳ ಬಲಿಯಾಗಿವೆ.