ಜುಲೈ 13ರ ವರೆಗೆ ನಡೆಯಲಿದೆ ವಿಶ್ವದ ಅತ್ಯಂತ ಹಳೆಯ, ಪ್ರತಿಷ್ಠಿತ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿ । ಈ ಬಾರಿಯದ್ದು 138ನೇ ಆವೃತ್ತಿಹಾಲಿ ಚಾಂಪಿಯನ್ ಆಲ್ಕರಜ್, ಜೋಕೋವಿಚ್, ಸಬಲೆಂಕಾ, ಯಾನಿಕ್ ಸಿನ್ನರ್, ಇಗಾ ಸ್ವಿಯಾಟೆಕ್, ಗಾಫ್ ಸೇರಿ ಪ್ರಮುಖರು ಕಣಕ್ಕೆ
ಟಿ20 ಕ್ರಿಕೆಟ್ನಲ್ಲಿ ಮಳೆ ಹಾಗೂ ಇತರ ಕಾರಣಗಳಿಂದ ಓವರ್ಗಳು ಕಡಿತಗೊಂಡರೆ ಇನ್ನು ಓವರ್ಗಳ ಬದಲು ಚೆಂಡಿನ ಲೆಕ್ಕದಲ್ಲಿ ಪವರ್ಪ್ಲೇ ನಿರ್ಧಾರವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಐಸಿಸಿ ಹೊಸ ನಿಯಮ ಪರಿಚಯಿಸಿದೆ.
ಮುಂದಿನ ವರ್ಷ ಜೂನ್ನಲ್ಲಿ ಇಂಗ್ಲೆಂಡ್ನಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಡೆಯಲಿದೆ. ಅದಕ್ಕಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಈಗಿಂದಲೇ ಸಿದ್ಧತೆ ಆರಂಭಿಸಲಿದ್ದು, ಶನಿವಾರದಿಂದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿವೆ. ಇಂಗ್ಲೆಂಡ್ನ 5 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.
ಭಾರತದ ತಾರಾ ಆಟಗಾರ ರಿಷಭ್ ಪಂತ್, ಐಸಿಸಿ ಟೆಸ್ಟ್ ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ಜೀವನಶ್ರೇಷ್ಠ 7ನೇ ಸ್ಥಾನಕ್ಕೇರಿದ್ದಾರೆ.