ಹಲವು ಯುವ, ಪ್ರತಿಭಾವಂತ ಕಬಡ್ಡಿ ಪಟುಗಳನ್ನು ಕ್ರೀಡಾ ಜಗತ್ತಿಗೆ ಪರಿಚಯಿಸುವ ಪ್ರೊ ಕಬಡ್ಡಿಯಲ್ಲಿ ಈ ಬಾರಿಯೂ ಕರ್ನಾಟಕದ ಹಲವು ಆಟಗಾರರು ಮಿಂಚಲು ಸಜ್ಜಾಗಿದ್ದಾರೆ. ಗಗನ್ ಗೌಡ ಈಗಾಗಲೇ ತಮ್ಮ ಛಾಪು ಮೂಡಿಸಿದ್ದು, ಇತರ ಕೆಲ ಆಟಗಾರರು ಕೂಡಾ ಉತ್ತಮ ಆಟವಾಡುವ ನಿರೀಕ್ಷೆಯಲ್ಲಿದ್ದಾರೆ.
ಜೆರ್ಸಿ ಪ್ರಾಯೋಜಕತ್ವದ ಮೂಲಬೆಲೆಯನ್ನು ಬಿಸಿಸಿಐ ಏರಿಕೆ ಮಾಡಲು ನಿರ್ಧರಿಸಿದ್ದು, ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯಕ್ಕೆ ₹3.5 ಕೋಟಿ, ಐಸಿಸಿ, ಏಷ್ಯಾ ಕ್ರಿಕೆಟ್ ಸಮಿತಿ (ಎಸಿಸಿ) ಆಯೋಜಿತ ಟೂರ್ನಿಗಳ ಪ್ರತಿ ಪಂದ್ಯಕ್ಕೆ ₹1.5 ಕೋಟಿ ಮೂಲ ಬೆಲೆ ನಿಗದಿ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಪ್ರೊ ಕಬಡ್ಡಿ 12ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಲು ಬೆಂಗಳೂರು ಬುಲ್ಸ್ ಸತತ 3ನೇ ಪಂದ್ಯದಲ್ಲೂ ವಿಫಲವಾಗಿದೆ. ಯು-ಮುಂಬಾ ವಿರುದ್ಧದ ಪಂದ್ಯದಲ್ಲಿ 28-48 ಅಂಕಗಳ ಹೀನಾಯ ಸೋಲಿನಿಂದಿಗೆ ಈ ಆವೃತ್ತಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಮೊದಲ ತಂಡ ಎನ್ನುವ ಅಪಖ್ಯಾತಿಗೆ ಗುರಿಯಾಯಿತು.