ಲಂಡನ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕ್ವಾಕರಾಲಿ ಸೈಮಂಡ್ಸ್ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಅದರಲ್ಲಿ ‘ಐಐಟಿ ಬಾಂಬೆ’ ಮತ್ತು ‘ಐಐಟಿ ದೆಹಲಿ’ ಟಾಪ್ 150ರೊಳಗೆ ಸ್ಥಾನ ಪಡೆದುಕೊಂಡಿದೆ.
ಮಾಧ್ಯಮ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಅಮೆರಿಕದ ರೂಪರ್ಟ್ ಮರ್ಡೋಕ್ ಅವರು ತಮ್ಮ 93ರ ‘ಎಳೆವಯಸ್ಸಿನಲ್ಲಿ’ 5ನೇ ಮದುವೆಯಾಗಿದ್ದಾರೆ.
ಇದು ಗ್ರಹಗಳ ಮೆರವಣಿಗೆ! ಸೌರಮಂಡಲದಲ್ಲಿ ಸಂಭವಿಸುವ ಈ ಅಪೂರ್ವ ವಿದ್ಯಮಾನ ಸೋಮವಾರ ಘಟಿಸಿತು. ಆದರೆ, ಬೆಂಗಳೂರು ಸೇರಿ ರಾಜ್ಯದಲ್ಲಿ ನಸುಕಿನ ಮಳೆ, ಮೋಡವಿದ್ದ ಕಾರಣ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ.
ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಬಾಹ್ಯಾಕಾಶ ಪ್ರಯಾಣಕ್ಕೆ ಕೈಗೊಂಡಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಶನಿವಾರ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10 ಗಂಟೆಗೆ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದಾರೆ.