ಮ್ಯಾನ್ಮಾರ್ನಿಂದ ಭಾರತಕ್ಕೆ ಬರುತ್ತಿರುವ ಅಕ್ರಮ ವಲಸಿಗರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಮುಕ್ತ ಸಂಚಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಕ್ತಿ ನೀಡುವ ಕ್ರಮಕ್ಕೆ ಬಂದಿದ್ದು, ಬಾಂಗ್ಲಾದೇಶ ರೀತಿ ಮ್ಯಾನ್ಮಾರ್ ಗಡಿಗೂ ಬೇಲಿಗಳನ್ನು ಅಳವಡಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.
ಭಾರತದ ಚಂದ್ರಯಾನ-3 ಯೋಜನೆಯ ಬಳಿಕ ಚಂದ್ರನ ಅಧ್ಯಯನಕ್ಕೆ ಜಪಾನ್ ಉಡಾವಣೆ ಮಾಡಿದ್ದ ಅತಿ ಚಿಕ್ಕ ಲ್ಯಾಂಡರ್ ಶುಕ್ರವಾರ ಚಂದ್ರನ ಮೇಲೆ ಲ್ಯಾಂಡ್ ಆಗಿದೆ ಎಂದು ಜಪಾನ್ ಹೇಳಿದೆ. ಈ ಮೂಲಕ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ಜಗತ್ತಿನ 5ನೇ ದೇಶ ಎಂಬ ಕೀರ್ತಿಗೆ ಜಪಾನ್ ಪಾತ್ರವಾಗಿದೆ.