ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಭಾನುವಾರದ ಪಂದ್ಯದಲ್ಲಿ ಕಣಕ್ಕಿಳಿದರು. ಈ ಮೂಲಕ 300 ಏಕದಿನ ಪಂದ್ಯ ಆಡಿದ ಭಾರತದ 7ನೇ ಹಾಗೂ ವಿಶ್ವದ 22ನೇ ಆಟಗಾರ ಎನಿಸಿಕೊಂಡರು. 463 ಪಂದ್ಯಗಳನ್ನಾಡಿರುವ ಸಚಿನ್, ವಿಶ್ವದಲ್ಲೇ ಅತಿ ಹೆಚ್ಚು ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದ ದಾಖಲೆ ಹೊಂದಿದ್ದಾರೆ.
ಕೊಹ್ಲಿ ಏಷ್ಯಾದಲ್ಲಿ ಆಡಿದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 16000 ರನ್ ಪೂರ್ಣಗೊಳಿಸಿದ್ದಾರೆ. ಅವರು ವೇಗವಾಗಿ ಈ ಸಾಧನೆ ಮಾಡಿದ ಆಟಗಾರ. ಕೇವಲ 340 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸಾಧಿಸಿದ್ದಾರೆ.