ಧರ್ಮಸ್ಥಳ ಬೆಂಬಲಿಸಿ ಜಯಕರ್ನಾಟಕ ಕಾರ್‌ ರ್ಯಾಲಿ

Aug 24 2025, 02:00 AM IST
ಧರ್ಮಸ್ಥಳದಲ್ಲಿನ ಘಟನೆಗಳು ಹಾಗೂ ಅಪಪ್ರಚಾರ ಹೋಗಲಾಡಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ಹೊರಟ ಕಾರುಗಳ ರ್‍ಯಾಲಿ ಹಾಸನ ಮೂಲಕ ಬೇಲೂರಿಗೆ ಆಗಮಿಸಿದ ಸಂದರ್ಭ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಆರೋಪ, ಅಪಸ್ವರಗಳಂತಹ ಘಟನೆಗಳನ್ನ ಸೃಷ್ಠಿಸುವಂತಹ ಸಂದರ್ಭಗಳನ್ನು ನೋಡಿದಾಗ ಆಘಾತವಾಯಿತು. ಇಳಿ ವಯಸ್ಸಿನ ಮಹಿಳೆಯೊಬ್ಬರು ಸುಳ್ಳು ಹೇಳಿದ್ದೇನೆ ಎಂಬುದನ್ನು ಆಕೆಯೇ ಒಪ್ಪಿಕೊಂಡಿರುವುದು ಮಾಧ್ಯಮದಲ್ಲಿ ನೋಡಿದ್ದೇವೆ. ಇದಕ್ಕೆಲ್ಲ ಯಾರೂ ಕಾರಣ, ಈ ಚಿತ್ರಕತೆ ಬರೆದವರ್‍ಯಾರು, ನಿರ್ಮಾಪಕ ಯಾರು ತಿಳಿಯುತ್ತಿಲ್ಲ ಎಂದರು.