ಶೀಘ್ರದಲ್ಲೇ ಪೌರ ಕಾರ್ಮಿಕರಿಗೆ ನಿವೇಶನ
Oct 11 2025, 12:02 AM ISTಪೌರಕಾರ್ಮಿಕರ ಬಗ್ಗೆ ಸ್ವತಃ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅಪಾರವಾದ ಗೌರವವನ್ನು ತೋರಿದ್ದಾರೆ. ಕಾರ್ಮಿಕರು ಮಳೆ, ಗಾಳಿ, ಚಳಿ ಎನ್ನದೇ ನಸುಕಿನಲ್ಲಿ ಸ್ಚಚ್ಛ ಮಾಡುವ ಪೌರಕಾರ್ಮಿಕರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ಸಲ್ಲಬೇಕಾದ ಸವಲತ್ತು ದೊರಕಬೇಕು. ಪೌರಕಾರ್ಮಿಕರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಮನಃಪೂರ್ವಕವಾಗಿ ಮಾಡುತ್ತಿದ್ದಾರೆ. ಚನ್ನಕೇಶವ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಆ ಸಂದರ್ಭದ ಸ್ವಚ್ಛತೆಗೊಳಿಸುವ ಕೀರ್ತಿ ಪೌರಕಾರ್ಮಿಕರಿಗೆ ಸಲ್ಲುತ್ತದೆ, ಪ್ರತಿವರ್ಷ ಪುರಸಭಾ ವತಿಯಿಂದ ಕಾರ್ಮಿಕರನ್ನ ಸನ್ಮಾನಿಸುತ್ತಿರುವುದು ಜನಮೆಚ್ಚುವ ಕೆಲಸವಾಗಿದೆ. ನಿವೇಶನ ನೀಡಲು ಮತ್ತು ನೀರು ಸರಬರಾಜುದಾರರಿಗೆ ಎಲ್ಲ ರೀತಿಯ ಸವಲತ್ತು ಕಲ್ಪಿಸಲು ಸದನದಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.