ಹಿಂದಿ ಭಾಷೆ ಉನ್ನತ ಹುದ್ದೆ ಪಡೆದುಕೊಳ್ಳಲು ಸಹಕಾರಿ: ಬಿಜಾಪುರ
Jul 21 2025, 01:30 AM ISTಹಿಂದಿ ಸಂಪರ್ಕ ಭಾಷೆಯಾಗಿದ್ದು ಕೇಂದ್ರ ಸರ್ಕಾರದ ಉದ್ಯೋಗ ಪರೀಕ್ಷೆಗಳಾದ ಐಎಎಸ್, ಯುಪಿಎಸ್, ಐಪಿಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಿಕೊಳ್ಳಲು ಅನುಕೂಲವಾಗುತ್ತದೆ. ಆ ಹಿನ್ನೆಲೆಯಲ್ಲಿ ಹಿಂದಿ ರಾಜ್ಯ ಭಾಷಾ ಸಂಘಟನೆಯನ್ನು ಬಲಿಷ್ಠಗೊಳಿಸಲು ಎಲ್ಲಾ ಹಿಂದಿ ಶಿಕ್ಷಕರು ಒಗ್ಗೂಡಬೇಕೆಂದು ಗದಗ ಜಿಲ್ಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಲ್. ಬಿಜಾಪುರ ಹೇಳಿದರು.