ಕಂದಾಯ ದಾಖಲೆಗಳಿಗೆ ಲಂಚ ಕೇಳುವ ಎಫ್‌ಡಿಎ: ವಿವಿಧ ಸಂಘಟನೆಗಳಿಂದ ತಹಸೀಲ್ದಾರರಿಗೆ ದೂರು
Jul 01 2025, 12:47 AM ISTಎಫ್‌ಡಿಎ ಕೃಷ್ಣರಾವ್ ರೈತರಿಂದ 18 ಲಕ್ಷ ರು. ಹಣ ಪಡೆದು ಸಾಗುವಳಿ ಜಮೀನಿನ ದಾಖಲೆ ನೀಡದೆ ಸ್ವಾಧೀನದಲ್ಲಿರುವ ರೈತರಿಗೆ ಅಗತ್ಯ ದಾಖಲೆ ಮಾಡಿಕೊಡದೆ, ಸ್ವಾಧೀನ ಅನುಭವದಲ್ಲೇ ಇಲ್ಲದ ಹಾಗೂ ಸಾಗುವಳಿಗೆ ಅರ್ಜಿಯೇ ಹಾಕದ ರೈತರಿಗೆ ಲಕ್ಷಾಂತರ ಹಣ ಪಡೆದು ಅವರ ಹೆಸರಿಗೆ ಮಾಡಿಕೊಡಲು ಮುಂದಾಗಿದ್ದಾನೆ. ಹಣ ಕೊಟ್ಟಿರುವ ನಾವು ದಾಖಲಾತಿ ಕೇಳಿದರೆ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗುತ್ತಾನೆ ಎಂದು ನೊಂದ ರೈತ ನರಸಿಂಹಯ್ಯ ತಮ್ಮ ಅಳಲು ತೊಡಿಕೊಂಡರು.