ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
Aug 20 2025, 02:00 AM ISTಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ಇಲ್ಲಿದ್ದ ನಾಲ್ಕು ಜನ ವೈದ್ಯರು ವರ್ಗಾವಣೆಯಾದರೆ, ದಂತ ವೈದ್ಯರೊಬ್ಬರಿಗೆ ಪೋಸ್ಟಿಂಗ್ ನೀಡಿಲ್ಲ. ನಾಲ್ವರು ವೈದ್ಯರ ವರ್ಗಾವಣೆಯಿಂದ ತೆರವಾದ ಸ್ಥಾನಗಳಿಗೆ ಮೂವರು ವೈದ್ಯರನ್ನು ನಿಯೋಜಿಸಿದ್ದರೂ ಅವರು ಹಾಜರಾಗಿಲ್ಲ. ಇರುವ ಒಬ್ಬ ಸ್ತ್ರೀರೋಗ ತಜ್ಞರ ಸಹಾಯದಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆ ತುಂಬಾ ಕಷ್ಟಸಾಧ್ಯವಾಗುತ್ತಿದೆ.