ಮನೆ ಮುಂದಿನ ಸ್ಮಶಾನದಲ್ಲೇ ಅಂತ್ಯಕ್ರಿಯೆ

Sep 13 2025, 02:04 AM IST
ತಾಲೂಕಿನ ಬಾಗೆ ಗ್ರಾಮದಲ್ಲಿ ಕ್ರೈಸ್ಥರ ಸ್ಮಶಾನವೊಂದಿದ್ದು ರಾಷ್ಟ್ರೀಯ ಹೆದ್ದಾರಿ ೭೫ ಚತುಷ್ಫಥ ರಸ್ತೆ ಹಾದುಹೋಗಿದ್ದರಿಂದ ಸ್ಮಶಾನದ ಜಾಗ ಸಂಪೂರ್ಣ ಕಡಿಮೆಯಾಗಿ ೪ ಭಾಗಗಳಾಗಿ ತುಂಡಾಗಿದೆ. ಹೆದ್ದಾರಿಯ ಒಂದು ಭಾಗದಲ್ಲಿ ಸರೋಜಮ್ಮ ಎಂಬ ಕುಟುಂಬದವರು ಮನೆ ಮಾಡಿಕೊಂಡು ಹಲವಾರು ವರ್ಷಗಳಿಂದ ವಾಸವಿದ್ದು ಮನೆಯ ಮುಂಭಾಗ ಕ್ರೈಸ್ಥರ ಸ್ಮಶಾನಕ್ಕೆ ಸೇರಿರುವ ಜಾಗ ಸ್ವಲ್ಪ ಉಳಿದಿರುತ್ತದೆ. ಪೊಲೀಸರ ಸಮ್ಮುಖದಲ್ಲಿ ಶುಕ್ರವಾರ ಮನೆಯ ಮುಂಭಾಗವೇ ಮೃತರ ಅಂತ್ಯಕ್ರಿಯೆ ಮಾಡಲಾಗಿದೆ. ಮನೆಯಲ್ಲಿ ಮಹಿಳೆಯರು , ಪುಟ್ಟ ಮಕ್ಕಳಿದ್ದು ಇದೀಗ ದಿನನಿತ್ಯ ಆತಂಕದಲ್ಲೆ ಮನೆಯಲ್ಲಿ ಇರಬೇಕಾಗಿದೆ. ಕೂಡಲೆ ಕ್ರೈಸ್ತರ ಸ್ಮಶಾನಕ್ಕೆ ಬೇರೆಡೆ ಜಾಗ ನೀಡಿ ಮನೆಯವರಿಗೆ ನ್ಯಾಯ ಒದಗಿಸುವ ಕೆಲಸವನ್ನು ತಾಲೂಕು ಆಡಳಿತ ಮಾಡಬೇಕಾಗಿದೆ.