ಸೋಲೂರಿಗೆ ಬಿಎಂಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಶ್ರೀನಿವಾಸ್
Sep 19 2025, 01:00 AM ISTಮೆಜೆಸ್ಟಿಕ್ ಹಾಗೂ ಮಾದಿಗೊಂಡನಹಳ್ಳಿ ಬಸ್ ಮಾರ್ಗ ಸಂಖ್ಯೆ - 258 ಕೆ.ಎಂ ಆಗಿದ್ದು ಕೆಂಪೇಗೌಡ ಬಸ್ ನಿಲ್ದಾಣದಿಂದ ಯಶವಂತಪುರ, ಮಾದನಾಯಕನಹಳ್ಳಿ, ನೆಲಮಂಗಲ, ಯಂಟಗಾನಹಳ್ಳಿ, ಮಹದೇವಪುರ, ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಹಾಗೂ ಮಾದಿಗೊಂಡನಹಳ್ಳಿಗೆ 2 ಬಸ್ ಸಂಚರಿಸಲಿವೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಬೆಳಿಗ್ಗೆ 9 ಮಧ್ಯಾಹ್ನ 2.45 ಹಾಗೂ ಹೊರಡಲಿದ್ದು, ವಾಪಾಸ್ಸು ಮಾದಿಗೊಂಡನಹಳ್ಳಿಯಿಂದ ಬೆಳಿಗ್ಗೆ 11.15 ಮತ್ತು ಮಧ್ಯಾಹ್ನ 3.45 ಬಸ್ ಹೊರಡಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.