ಅರಳಿಸುವ ಕನ್ನಡ ಬೇಕೇ ಹೊರತು, ಕೆರಳಿಸುವುದಲ್ಲ
Nov 26 2023, 01:15 AM ISTಕಸ್ತೂರಬಾ ಬಾಲಕಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಡಾ. ಬಿ.ಎನ್. ತಂಬುಳಿ ಮಾತನಾಡಿ, ಕನ್ನಡಿಗರು ಸ್ವಾಭಿಮಾನಿಗಳು. ಇಲ್ಲಿ ಗಂಭೀರತೆ ಇದೆ, ಉದಾರತೆ ಇದೆ. ಕವಿಗಳಿದ್ದಾರೆ. ಕಾವ್ಯಗಳಿವೆ, ಶಿಲ್ಪಗಳಿವೆ. ವಿಶ್ವದಲ್ಲಿಯೇ ಶ್ರೇಷ್ಠವಾದ ಈ ಭಾಷೆಯನ್ನು ಅಕ್ಷರ ಕಲಿತವರು ಬೆಳೆಸಬೇಕಾಗಿದೆ ಎಂದರು. ಹಾಗೆ ನೋಡಿದರೆ ಅನಕ್ಷರಸ್ಥ ಸಮಾಜದಿಂದಲೇ ಕನ್ನಡ ಉಳಿದು ಬೆಳೆದಿದೆ. ಶತಮಾನಗಳಿಂದಲೂ ತಮ್ಮ ಹೊಟ್ಟೆಪಾಡಿಗಾಗಿ ಊರೂರು ತಿರುಗುತ್ತಿದ್ದ ಬಳೆಗಾರರು, ಬುಡಬುಡಕಿಯವರು, ಜೋಗಿಗಳು, ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಮಾತನಾಡುತ್ತಾರೆ. ಅವರ ಕನ್ನಡ ಭಾಷೆಯನ್ನು ಕೇಳಿದರೆ ಮನಸ್ಸು ಖುಷಿಗೊಳ್ಳುತ್ತದೆ. ಅವರ ಜಾಣ್ಮೆ ಹಾಗಿತ್ತು. ಜನಪದರಿಂದಲೇ ಕನ್ನಡ ಭಾಷೆ ಉಳಿಯುತ್ತಿದೆ ಎಂದು ಹೇಳಿದರು.