ಸೈಕಲ್‌ನಲ್ಲಿ 11 ಜ್ಯೋತಿರ್ಲಿಂಗ ದರ್ಶನ ಮಾಡಿದ ಸಾಹಸಿ

Jan 18 2024, 02:03 AM IST
ರಬಕವಿ-ಬನಹಟ್ಟಿ: ಒಬ್ಬಂಟಿಯಾಗಿ ಸೈಕಲ್ ಮೇಲೆ ಬರೋಬ್ಬರಿ 3200 ಕಿ.ಮೀ ಸಂಚರಿಸಿ 11 ಜ್ಯೋತಿರ್ಲಿಂಗಗಳ ದರ್ಶನ ಮಾಡಿ ಅಪರೂಪದ ಸಾಹಸವನ್ನು ಬೆಳಗಾವಿ ಜಿಲ್ಲೆಯ ಪಾಲಬಾಂವಿ ಗ್ರಾಮದ ಸುರೇಶ ಅಲ್ಲಪ್ಪ ಕಡಪಟ್ಟಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದ ಮೂಕಾಂಬಿಕಾ ದೇವಿ ಸನ್ನಿಧಿಯಿಂದ ಮಹಾಲಯ ಅಮಾವಾಸ್ಯೆಗೂ ಸೈಕಲ್ ಯಾತ್ರೆ ಆರಂಭಿಸಿ ಮುಂಬೈ, ನಾಸಿಕ್‌, ಗುಜರಾತ, ರಾಜಸ್ಥಾನ, ಬನಾರಸ್ ಮಾರ್ಗವಾಗಿ ಕಾಶಿ ತಲುಪಿ ಅಲ್ಲಿ ವಿಶ್ವನಾಥನಿಗೆ ಅಭಿಷೇಕ ಮಾಡಿಸಿ ಅಲ್ಲಿಂದ 11 ಜ್ಯೋತಿರ್ಲಿಂಗಗಳ ದರ್ಶನ ಮಾಡಿದ್ದಾರೆ. ಪ್ರಯಾಣದುದ್ದಕ್ಕೂ ದಿನಕ್ಕೆರಡು ಬಾಳೆಹಣ್ಣು ಹಾಗೂ ಒಂದು ಗ್ಲಾಸ್ ಹಾಲು ಸೇವಿಸಿ 45 ದಿನಗಳ ಕಾಲ ಪ್ರತಿದಿನ 180 ಕಿ.ಮೀ ದೂರವನ್ನು ಸೈಕಲ್ ತುಳಿಯುವ ಮೂಲಕ ಕ್ರಮಿಸಿ ಪ್ರಯಾಣ ಮುಗಿಸಿದ್ದಾರೆ.