ಚನ್ನರಾಯಪಟ್ಟಣದಲ್ಲಿ ಮಹಿಳೆ ಮೇಲೆ ಕಾಡುಕೋಣ ದಾಳಿ
Oct 12 2025, 01:00 AM ISTವಿದ್ಯಾನಗರದಲ್ಲಿ ಕಾಣಿಸಿಕೊಂಡ ಕಾಡುಕೋಣ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. 54 ವರ್ಷದ ಶಾಂತಮ್ಮ ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದು, ಶನಿವಾರ ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಶಾಂತಮ್ಮ ಎಂದಿನಂತೆ ಹಂದಿ ಮೇಯಿಸಲು ಬಂದಿದ್ದರು. ಇದೇ ವೇಳೆ ಹಂದಿಗಳಿರುವ ಜಾಗಕ್ಕೆ ಕಾಡುಕೋಣವೊಂದು ಬಂದಿದೆ. ಆದರೆ ಶಾಂತಮ್ಮ, ಎಮ್ಮೆ ಎಂದು ತಿಳಿದು, ಅದನ್ನು ಓಡಿಸಲು ಮುಂದಾದಾಗ ಆಕೆಯ ಮೇಲೆ ದಾಳಿ ನಡೆಸಿದ್ದು, ದಾಳಿಯಿಂದ ಶಾಂತಮ್ಮ ಅವರ ಎಡಗೈ ಮುರಿದಿದೆ. ಅಲ್ಲದೇ ಜೋರಾಗಿ ನೆಲಕ್ಕೆ ಬಿದ್ದ ಪರಿಣಾಮ ಹೊಟ್ಟೆ ಹಾಗೂ ಕೈ ಕಾಲಿಗೆ ಗಾಯವಾಗಿದೆ.