ಕೋತಿಗಳ ದಾಳಿ: ಮಹಿಳಾ ಭಕ್ತರಿಗೆ ಗಂಭೀರ ಗಾಯ
Sep 28 2025, 02:00 AM ISTಪ್ರವಾಸಿ ತಾಣ ಮೇಲುಕೋಟೆಯಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಶನಿವಾರ ಕೋತಿಯ ಹಿಂಡು ಮಹಿಳಾ ಭಕ್ತರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಯೋಗನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ನಡೆದಿದೆ.ಬಳ್ಳಾರಿ ಜಿಲ್ಲೆಯಿಂದ ಮಹಿಳೆಯರ ತಂಡ ಸ್ವಾಮಿ ದರ್ಶನಕ್ಕೆ ದೇಗುಲಕ್ಕೆ ಬಂದ ವೇಳೆ ಸರಸ್ವತಿ ಎಂಬ ಮಹಿಳೆ ಮೇಲೆ ಕೋತಿಗಳು ದಾಳಿ ಮಾಡಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.