ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಸರಿಯಲ್ಲ: ಟ್ರಸ್ಟ್ ಸದಸ್ಯ ಆನಂದ್ ಆಕ್ರೋಶ
Feb 01 2024, 02:03 AM ISTನಮ್ಮ ಗ್ರಾಪಂನಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಎಲ್ಲ ಬೆಂಬಲಿತ ಸದಸ್ಯರು ಇದ್ದಾರೆ. ಎಲ್ಲಾ ಪಕ್ಷದವರು ಹನುಮ ಧ್ವಜಕ್ಕೆ ಬೆಂಬಲ ನೀಡಿದ್ದಾರೆ. ಈಗಲೂ ಎಲ್ಲರೂ ಧ್ವಜ ಬೇಕು ಅಂತ ಹೇಳ್ತಿದ್ದಾರೆ. ಆದರೆ, ಪೊಲೀಸರು ರಾಜಕೀಯ ಮಾಡಿ ನಮ್ಮನ್ನು ಹೊಡೆಯುತ್ತಿದ್ದಾರೆ. ನಾನೊಬ್ಬ ರಿಟೈರ್ಡ್ ಪಿಟಿ ಮಾಸ್ಟರ್. ನಮಗೆ ದೇಶ ಭಕ್ತಿಯನ್ನು ಬೇರೆಯವರು ಹೇಳಿಕೊಡುವ ಆಗತ್ಯವಿಲ್ಲ. ಧಾರ್ಮಿಕ ವಿಚಾರ ಬಂದಾಗ ಗ್ರಾಮದ ಯುವಕರು ಆಕ್ರೋಶವಾಗಿದ್ದು ನಿಜ. ಅದನ್ನೇ ನೆಪಮಾಡಿಕೊಂಡು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು ಸರಿಯಲ್ಲ.