ದನಗಳ ಕಳ್ಳತನ ಪ್ರಕರಣ ಹೆಚ್ಚಳ
Dec 01 2023, 12:45 AM ISTತಾಲೂಕಿನಾದ್ಯಂತ ದನಗಳ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪದೇ ಪದೇ ಕಳ್ಳತನದ ಪ್ರಕರಣಗಳು ದಾಖಲಾದರೂ ಭೇದಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂಬ ಆರೋಪ ರೈತ ವಲಯದಿಂದ ಕೇಳಿಬರುತ್ತಿದೆ.ಹಾಡು ಹಗಲೇ ಕಳ್ಳತನ ನಡೆಯುತ್ತಿವೆ. ಕಳ್ಳರ ಭಯದಿಂದ ರೈತರು ತಮ್ಮ ಜಾನುವಾರುಗಳನ್ನು ಹಗಲು ರಾತ್ರಿ ಕಾಯುವಂತಾಗಿದೆ.ತಾಲೂಕಿನ ವಿವಿಧ ದೇವಸ್ಥಾನಗಳ ಹುಂಡಿ ಕಳ್ಳತನ, ಸರಣಿ ಮನೆ ಕಳ್ಳತನ, ಜಾನುವಾರು ಕಳ್ಳತನ, ಅಂಗಡಿ ಕಳ್ಳತನ ಸೇರಿದಂತೆ ಕಳ್ಳರ ಕೈ ಚಳಕವೇ ಮೇಲುಗೈ ಸಾಧಿಸಿದೆ.