ದರೋಡೆ ಪ್ರಕರಣ, ನಾಲ್ವರಿಗೆ 10 ವರ್ಷ ಕಠಿಣ ಶಿಕ್ಷೆ
Oct 06 2023, 01:17 AM ISTನಾಲ್ಕು ವರ್ಷಗಳ ಹಿಂದೆ ಮುಂಡಗೋಡ ಪಟ್ಟಣವನ್ನೇ ತಲ್ಲಣಗೊಳಿಸಿದ ಟಿಬೇಟಿಯನ್ ಕಾಲನಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳಾದ ವಸಂತ ಕರಿಯಪ್ಪ ಕೊರವರ, ಮಂಜು ಅರ್ಜುನ ನವಲೆ, ಕಿರಣ ಪ್ರಕಾಶ ಸೂಳಂಕಿ ಹಾಗೂ ಮಧುಸಿಂಗ್ ಗಂಗಾರಾಮ ಸಿಂಗ್ ರಜಪೂತ ಆರೋಪಿಗಳಿಗೆ ಕಲಂ.೩೯೫ ಐಪಿಸಿಯಂತೆ ೧೦ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹ ೧೦,೦೦೦ ದಂಡ ತಪ್ಪಿದ್ದಲ್ಲಿ ೧ ವರ್ಷ ಕಾರಾಗೃಹ ಶಿಕ್ಷೆ, ಕಲಂ.೩೯೭ ಐಪಿಸಿಯಂತೆ ೭ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಎಲ್ಲ ಆರೋಪಿತರಿಗೂ ತಲಾ ₹ ೫,೦೦೦ ದಂಡ, ತಪ್ಪಿದಲ್ಲಿ ೬ ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.