ಡಾ.ಧನಂಜಯ ಸರ್ಜಿ ‘ಗುಂಡು’ ಪಾರ್ಟಿ ಬಿಜೆಪಿ ಆಶಯಕ್ಕೇ ಧಕ್ಕೆ: ಕೆ.ಎಸ್.ಈಶ್ವರಪ್ಪ
May 30 2024, 12:50 AM ISTಡಾ. ಧನಂಜಯ ಸರ್ಜಿ ನೀಡಿದ ಗುಂಡು ಪಾರ್ಟಿಯಲ್ಲಿ ಪಾಲ್ಗೊಂಡವರೇ ಮಾರನೇ ದಿನ ನನಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದು, ತಾವೆಲ್ಲರೂ ರಘುಪತಿ ಭಟ್ ಗೇ ಮತ ಹಾಕುವುದಾಗಿಯೂ ತಿಳಿಸಿದ್ದಾರೆ. ಒಟ್ಟಾರೆ ಬಿಜೆಪಿಯ ಶೇ. 70-80 ರಷ್ಟು ಮಂದಿ ರಘುಪತಿ ಭಟ್ ಗೆ ಮತ ಹಾಕಲಿದ್ದು, ಭಟ್ಟರು ಭಾರೀ ಬಹುಮತದಿಂದ ಗೆಲ್ಲಲಿದ್ದಾರೆ. ಯಾರು ಕೆಜೆಪಿಯಲ್ಲಿದ್ದರೋ ಅವರು ಮಾತ್ರ ಡಾ.ಧನಂಜಯ ಸರ್ಜಿಯವರಿಗೆ ಮತ ಹಾಕಲಿದ್ದಾರೆ.