ಕೆರಗೋಡಿನಲ್ಲಿ ಮತ್ತೆ ಹನುಮ ಧ್ವಜ ಹಾರಿಸಿ: ಬಿಜೆಪಿ
Jan 30 2024, 02:02 AM ISTಹನುಮ ಧ್ವಜ ಹಾರಿಸಿದ್ದ ವಿಶಾಲ ಕಂಬದ ಮೇಲೆ ರಾಷ್ಟ್ರ ಧ್ವಜಾರೋಹಣವನ್ನು ಮಧ್ಯಾಹ್ನ 3 ಗಂಟೆಗೆ ಮಾಡುವ ಮೂಲಕ ರಾಷ್ಟ್ರಧ್ವಜಕ್ಕೂ ಕಾಂಗ್ರೆಸ್ ಸರ್ಕಾರ, ಪೊಲೀಸ್ ಇಲಾಖೆ ಅವಮಾನಿಸಿದೆ. ರಾಷ್ಟ್ರಧ್ವಜಕ್ಕೆಂದೇ ಧ್ವಜ ಸಂಹಿತೆ ಇದೆ. ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನೇ ಉಲ್ಲಂಘಿಸುವ ಮೂಲಕ ಸರ್ಕಾರ ಅವಮಾನ ಮಾಡಿದ್ದನ್ನು ಖಂಡಿಸುತ್ತೇವೆ. ತಕ್ಷಣವೇ ಕೆರಗೋಡಿನಲ್ಲಿ ಮತ್ತೆ ಹನುಮನ ಧ್ವಜ ಹಾರಿಸಬೇಕು. ಈ ಮೂಲಕ ಹಿಂದು ಸಮಾಜಕ್ಕೆ ಗೌರವ ನೀಡುವ ಮಾದರಿಯಲ್ಲಿ ಇನ್ನಾದರೂ ಸರ್ಕಾರ ಕೆಲಸ ಮಾಡಲಿ.