ನೆನಗುದಿಗೆ ಬಿದ್ದಿದ್ದ ವಿ.ಸಿ.ಕಾಲೋನಿ ಹಳೆ ಅಂಚೆ ಕಚೇರಿಯ ರಸ್ತೆ ಅಭಿವೃದ್ಧಿಗೆ ಕೊನೆಗೂ ಚಾಲನೆ
Feb 10 2025, 01:47 AM ISTಕೆನ್ನಾಳು ಗ್ರಾಮದ ಜಮೀನಿನ ಮಾಲೀಕರು ಈ ರಸ್ತೆ ನಿರ್ಮಾಣಕ್ಕೆ ಐದಾರು ಬಾರಿ ಅಡ್ಡಿ ಉಂಟು ಮಾಡಿದ್ದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನೆನಗುದಿಗೆ ಬಿದ್ದಿತ್ತು. ಇದರಿಂದ ಸ್ಥಳೀಯ ನಿವಾಸಿಗಳಿಗೆ ಬಹಳ ತೊಂದರೆಯಾಗಿತ್ತು. ಆದರೆ, ಇದೀಗ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಅವರು ಖುದ್ದು ನಿಂತು ರಸ್ತೆ ಕಾಮಗಾರಿಗೆ ಚಾಲನೆ ಕೊಡಿಸುವ ಮೂಲಕ ರಸ್ತೆಗೆ ಮುಕ್ತಿ ದೊರಕಿದಂತಾಗಿದೆ.