• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹಲವೆಡೆ ಬಸ್ ಸೇವೆಗಳ ಆರಂಭ: ಕೃಷಿ ಚಲುವರಾಯಸ್ವಾಮಿ

Oct 25 2024, 12:49 AM IST
ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಇದರಿಂದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೂ ಸಾಕಷ್ಟು ಲಾಭವಾಗಿದೆ. ಈ ಯೋಜನೆಯನ್ನು ಮತಷ್ಟು ವಿಸ್ತರಿಸುವ ಜತೆಗೆ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೂತನ ಬಸ್‌ಗಳನ್ನು ಹೊಸ ಮಾರ್ಗಗಳಿಗೆ ವಿಸ್ತರಿಸಲಾಗಿದೆ. ಜನರು ಇದರ ಅನುಕೂಲ ಪಡೆದುಕೊಳ್ಳಬೇಕು.

ರೈತರೇ ಚಂದಾ ಹಾಕಿ ಚಿಕ್ಕಾಟಿ-ಹುಣಸಿನಪುರ ರಸ್ತೆ ದುರಸ್ತಿ

Oct 24 2024, 12:40 AM IST
ತಾಲೂಕಿನ ಚಿಕ್ಕಾಟಿ-ಹುಣಸಿನಪುರ ಸಂಪರ್ಕ ರಸ್ತೆ ಹದಗೆಟ್ಟಿದ್ದ ಬಗ್ಗೆ ಗ್ರಾಪಂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ದುರಸ್ತಿಗೆ ಮುಂದಾಗದ ಹಿನ್ನೆಲೆಯಲ್ಲಿ ರೈತರು ತಾವೇ ಚಂದಾ ಹಾಕಿ ರಸ್ತೆ ದುರಸ್ತಿಪಡಿಸಿಕೊಳ್ಳುವ ಮೂಲಕ ಜನಪ್ರತಿನಿಧಿಗಳಿಗೆ ಟಾಂಗ್‌ ಕೊಟ್ಟಿದ್ದಾರೆ.

ರಸ್ತೆ ಕಾಣದೆ ಕೊಚ್ಚಿಹೋದ ಗೂಡ್ಸ್ ವಾಹನ

Oct 24 2024, 12:31 AM IST
ಮಳೆ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ರಸ್ತೆ ಕಾಣದೆ ಗೂಡ್ಸ್ ವಾಹನ ಕೊಚ್ಚಿ ಹೋದ ಘಟನೆ ತಾಲೂಕಿನ ತೊರೇಹಳ್ಳಿಯ ಹಳ್ಳದ ಕಚ್ಚಾ ಸೇತುವೆ ಬಳಿ ನಡೆದಿದೆ.

ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಲೋಕೋಪಯೋಗಿ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ

Oct 23 2024, 12:55 AM IST
ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ, ಮರಳಗಾಲ, ದೊಡ್ಡಪಾಳ್ಯ, ಮಂಡ್ಯಕೊಪ್ಪಲು ವೃತ್ತ ಸೇರಿದಂತೆ ಗೆಂಡೆಹೊಸಳ್ಳಿ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಗುಂಡಿ ಬಿದ್ದು, ಜೊತೆಗೆ ರಸ್ತೆಯ ಎರಡು ಬದಿಯಲ್ಲಿ ಗಿಡಗೆಂಟಿಗಳು ಬೆಳೆದು ತಿರುವುನಲ್ಲಿ ಬರುವ ವಾಹನಗಳು ಎದುರು ಬರುವ ವಾಹನ ಸವಾರರಿಗೆ ಕಾಣದೆ ಪ್ರತಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.

ಹಳ್ಳ ಹಿಡಿದ ಆಲೂರು ಪಟ್ಟಣದ ಮುಖ್ಯ ರಸ್ತೆ

Oct 23 2024, 12:37 AM IST
ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಮುಖ್ಯ ರಸ್ತೆಯನ್ನು ಪಟ್ಟಣ ಪಂಚಾಯಿತಿಯವರು, ಕಳೆದ ಕೆಲವು ವರ್ಷಗಳ ಹಿಂದೆ ನಗರೋತ್ಥಾನ ಅನುದಾನದಡಿ ಡಾಂಬರೀಕರಣ ನಡೆಸಿ ಆ ಸಮಯದಲ್ಲಿದ್ದ, ಏಕಪದ ಕಾಂಕ್ರೀಟ್ ರಸ್ತೆಯನ್ನು ತೆರವುಗೊಳಿಸದೆ ಅದರ ಮೇಲೆ ಡಾಂಬರೀಕರಣ ನಡೆಸಿ, ಅವೈಜ್ಞಾನಿಕ ಮಾದರಿಯಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರು ನಿಲ್ಲುವುದಿಲ್ಲವೆಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು ಅದನ್ನು ಲೆಕ್ಕಿಸದೆ, ಪಟ್ಟಣ ಪಂಚಾಯಿತಿಯವರು ವೀರಶೈವ ಕಲ್ಯಾಣ ಮಂಟಪದಿಂದ ರೇಣುಮಿಲ್‌ವರೆಗೂ ಡಾಂಬರೀಕರಣ ನಡೆಸಿ , ಮಧ್ಯದಲ್ಲಿ ಕಾಂಕ್ರೀಟ್ ಡಿವೈಡರ್‌ ನಿರ್ಮಿಸಿ ದ್ವಿಪಥ ರಸ್ತೆಯನ್ನಾಗಿಸಿದ್ದರು.

ಮಳೆ ನೀರಿನಲ್ಲಿ ಕೊಚ್ಚಿ ಹೋದ ರಿಂಗ್ ರಸ್ತೆ

Oct 23 2024, 12:34 AM IST
ನಿರಂತರವಾಗಿ ಮಳೆ ಸುರಿದು ತೇಜೂರು ಕೆರೆ, ಸೀಗೆ ಕೆರೆ, ಚಿಕ್ಕಕೊಂಡಗುಳ, ಸೇರಿದಂತೆ ಹಲವಾರು ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಈ ನೀರು ರಿಂಗ್‌ ರಸ್ತೆ ಮೂಲಕವೇ ತಮ್ಲಾಪುರ ಸಮೀಪ ಇರುವ ಹುಣಸಿನಕೆರೆಗೆ ಸೇರುತ್ತದೆ. ಹಾಗಾಗಿ ರಿಂಗ್‌ ರಸ್ತೆ ಮೇಲೆ ನೀರು ಪ್ರವಾಹದ ರೂಪದಲ್ಲಿ ನುಗ್ಗುತ್ತಿದೆ. ನೀರಿನ ರಭಸಕ್ಕೆ ರಸ್ತೆಯ ಡಾಂಬರ್‌ ಕೂಡ ಕೊಚ್ಚಿ ಹೋಗಿದೆ. ಇದನ್ನರಿತ ಗ್ರಾಮಸ್ಥರು ಪೊಲೀಸ್ ಠಾಣೆಗೆ ಕರೆ ಮಾಡಿ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ ಮಾಡುವಂತೆ ಮನವಿ ಮಾಡಿದ್ದಾರೆ.

ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿರುವ ಸಾರ್ವಜನಿಕ ರಸ್ತೆ ತೆರವುಗೊಳಿಸಿ

Oct 23 2024, 12:33 AM IST
ಪರಿಶಿಷ್ಟ ಜಾತಿ/ವರ್ಗದ ಜನರು ಸೇರಿ ನೂರಾರು ರೈತರ ಕೃಷಿ ಭೂಮಿ ಇರುವ ರಸ್ತೆಯನ್ನು ಪಾಲಿಟೆಕ್ನಿಕ್ ಸಂಸ್ಥೆಯವರು ಮುಚ್ಚಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದಾರೆ. ಇದರಿಂದ ದಲಿತ ಸಮುದಾಯದ ಜನ ಸೇರಿದಂತೆ ರೈತರು ಸತ್ತವರ ಶವ ತೆಗೆದುಕೊಂಡು ಹೋಗಲು ನಾಲ್ಕು ಕಿಮೀ ಸುತ್ತಿ ಬರಬೇಕಾಗಿದೆ. ಕೂಡಲೇ ಪಾಲಿಟೆಕ್ನಿಕ್ ಆವರಣದೊಳಗೆ ಸೂಕ್ತ ಜಾಗ ಗುರುತಿಸಿ ಹೊಸ ರಸ್ತೆ ನಿರ್ಮಿಸಿಕೊಡಬೇಕು.

ವಾರದಿಂದ ಧಾರಾಕಾರ ಮಳೆ - ಅತಿವೃಷ್ಟಿಗೆ ನಡುಗಿದ ಜಿಲ್ಲೆ: ಬೆಳೆ, ರಸ್ತೆ ಜಲಾವೃತ- ಸಂಪರ್ಕ ಬಂದ್‌

Oct 22 2024, 01:17 AM IST
ಕಳೆದೊಂದು ವಾರದಿಂದ ನಗರ ಸೇರಿದಂತೆ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅನೇಕ ರಸ್ತೆಗಳು ಜಲಾವೃತವಾದರೆ, ಬೆಳೆಗಳು ಹಾಳಾಗುತ್ತಿದ್ದು, ಮನೆಗಳಿಗೆ ನೀರು ನುಗ್ಗುವುದು, ಅಲ್ಲಲ್ಲಿ ಮನೆಗಳು ಹಾನಿಗೀಡಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಆಸ್ಪತ್ರೆ ಮುಂದಿನ ರಸ್ತೆ ಬದಿ ವಾಹನಗಳ ನಿಲುಗಡೆ ತಪ್ಪಿಸಿ

Oct 22 2024, 12:14 AM IST
ಡಾ. ಅಂಬೇಡ್ಕರ್‌ ವೃತ್ತದ ಸಮೀಪ ಹೆದ್ದಾರಿಯ ಅರಕಲಗೂಡು ರಸ್ತೆಯ ಎರಡು ಬದಿಯಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಇದ್ದು, ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ನಿಲುಗಡೆಯಿಂದ ವೈದ್ಯರು, ಸಿಬ್ಬಂದಿ, ರೋಗಿಗಳು ಹಾಗೂ ತುರ್ತು ಚಿಕಿತ್ಸೆ ವಾಹನಗಳ ಓಡಾಟಕ್ಕೆ ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ ಅಗತ್ಯ ಪೊಲೀಸ್ ಬಂದೋಬಸ್ತಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಳಪೆ ಕಾಮಗಾರಿ: ಮತ್ತೆ ಹದಗೆಟ್ಟ ತಲಕಾವೇರಿ ಸಂಪರ್ಕ ರಸ್ತೆ

Oct 22 2024, 12:09 AM IST
ಕಾವೇರಿ ಜಾತ್ರೆಯ ಸಂದರ್ಭ ಇದೇ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ನಡೆಸಲಾಗಿದ್ದು, ಜಾತ್ರೆ ಮುಗಿಯುತ್ತಿದ್ದಂತೆ ರಸ್ತೆಯಲ್ಲಿ ಮತ್ತೆ ಗುಂಡಿ ಬಿದ್ದಿದೆ. ಜತೆಗೆ ರಸ್ತೆ ಕಾಮಗಾರಿ ವೇಳೆ ಜಲ್ಲಿ ಹುಡಿ ಸುರಿದಿದ್ದು, ಇದರಿಂದ ವ್ಯಾಪಕವಾಗಿ ಧೂಳು ಆವರಿಸುತ್ತಿದೆ.
  • < previous
  • 1
  • ...
  • 39
  • 40
  • 41
  • 42
  • 43
  • 44
  • 45
  • 46
  • 47
  • ...
  • 107
  • next >

More Trending News

Top Stories
ಎಚ್ಚರ, ಆಪರೇಷನ್‌ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್‌
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್‌ ವರಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved