ಚಿತ್ರದುರ್ಗದಲ್ಲಿ ಮತ್ತೆ ರಸ್ತೆ ಅಗಲೀಕರಣದ ಗುಮ್ಮ
Dec 25 2024, 12:47 AM IST ಚಿತ್ರದುರ್ಗ ನಗರದ ಪ್ರಮುಖ ಬೀದಿಯಲ್ಲಿನ ವರ್ತಕರ ಮನದೊಳಕ್ಕೆ ಮತ್ತೆ ರಸ್ತೆ ಅಗಲೀಕರಣದ ಗುಮ್ಮ ಬಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ವೀರೇಂದ್ರ ಪಪ್ಪಿ, ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಅವರುಗಳು ಕುಳಿತು ಸಭೆ ನಡೆಸಿ ರಸ್ತೆ ಅಗಲೀಕರಣದ ತೀರ್ಮಾನ ಕೈಗೊಂಡಿರುವುದರಿಂದ ವರ್ತಕರು ಮತ್ತೊಂದು ಸುತ್ತಿನ ಆತಂಕದ ಮಡುವಿಗೆ ನೂಕಲ್ಪಟ್ಟಿದ್ದಾರೆ.