ಸಿದ್ದರಾಮಯ್ಯನವರದ್ದು ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರ: ಗೋವಿಂದ ಕಾರಜೋಳ ವಾಗ್ದಾಳಿ
Dec 25 2023, 01:30 AM ISTವಿಜಯಪುರ: ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಬಂದ್ ಮಾಡಿದ್ದು, ಸಿದ್ದರಾಮಯ್ಯ ಸರ್ಕಾರ ಲಂಚ ಕೇಳುವ ಲಜ್ಜೆಗೆಟ್ಟ ಸರ್ಕಾರವಾಗಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಬಂದ್ ಮಾಡಿ ಲಂಚ ತಿನ್ನುತ್ತಿದ್ದಾರೆ. ಜನರ ಅಸಮದಾನವನ್ನು ಬೆರೆಡೆಗೆ ಸೆಳೆಯಲು ಗಿಮಿಕ್ ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.