ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಹಗರಣಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದ ಪ್ರಮುಖ ಆರೋಪಿ ನೀರವ್ ಮೋದಿಯ ಕಿರಿಯ ಸಹೋದರ ನೇಹಲ್ ಮೋದಿಯನ್ನು ಶುಕ್ರವಾರ ಅಮೆರಿಕದಲ್ಲಿ ಬಂಧಿಸಲಾಗಿದೆ.
ಷೇರುಪೇಟೆಯಲ್ಲಿ ಕೃತಕ ಏರಿಳಿತ ಸೃಷ್ಟಿಸಿ ಅಕ್ರಮವಾಗಿ 4843 ಕೋಟಿ ರು. ಲಾಭ ಗಳಿಸಿದ ಆರೋಪದ ಮೇರೆಗೆ ಅಮೆರಿಕ ಮೂಲದ ಅಂತಾರಾಷ್ಟ್ರೀಯ ಷೇರು ಟ್ರೇಡಿಂಗ್ ಕಂಪನಿ ಜೇನ್ ಸ್ಟ್ರೀಟ್‌ನ ಸಹಸಂಸ್ಥೆಗಳ ಮೇಲೆ ಸೆಬಿ ನಿರ್ಬಂಧ ವಿಧಿಸಿದೆ.
ಮೋಟಾರು ವಾಹನ ತೆರಿಗೆ ಪಾವತಿಸದೆ ವಂಚಿಸಿದ್ದ ಐಷಾರಾಮಿ ಕಾರಿನ ಮಾಲೀಕರಿಗೆ ಬಿಸಿ ಮುಟ್ಟಿಸಿದ ಬೆಂಗಳೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, 1.41 ಕೋಟಿ ರು. ತೆರಿಗೆ ವಸೂಲಿ ಮಾಡಿದ್ದಾರೆ.
ಆರ್‌ಕಾಂ ಸಂಸ್ಥೆಯು ಸಾಲವನ್ನು ತೆಗೆದುಕೊಂಡ ಉದ್ದೇಶ ಬಿಟ್ಟು ಬೇರೆ ಕೆಲಸಕ್ಕೆ ಆ ಮೊತ್ತವನ್ನು ಬಳಸಿರುವ ಹಿನ್ನೆಲೆಯಲ್ಲಿ, ಅದನ್ನು ಎಸ್‌ಬಿಐ ವಂಚನೆ ಎಂದು ಪರಿಗಣಿಸಿದ್ದು, ಅದರ ನಿರ್ದೇಶಕ ಅನಿಲ್ ಅಂಬಾನಿ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ವರದಿ ಸಲ್ಲಿಸಿದೆ.