ಶಿಕ್ಷಣದಿಂದ ಸಮಾಜವನ್ನು ಬದಲಿಸಬಹುದು ಎಂದ ಶಾಸಕ ಮಂಜು
Nov 26 2024, 12:45 AM ISTದೇಶದ ಬದಲಾವಣೆ ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ. ಆದ್ದರಿಂದ ರೈತರು ತಮ್ಮ ಮಕ್ಕಳನ್ನು ವಿದ್ಯಾವಂತರಾಗಿ, ಬುದ್ಧಿವಂತರನ್ನಾಗಿ, ಮಾಡಬೇಕು ಎಂದು ಶಾಸಕ ಎ.ಮಂಜು ಮನವಿ ಮಾಡಿದರು. ಎಲ್ಲಾ ಪೋಷಕರೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ, ಸುಸಂಸ್ಕೃತರಾಗಿ ಬಾಳುವಂತೆ ಮಾಡಬೇಕು ಎಂದರು. ಕುಂಚಿಟಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 11ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಕೇಂದ್ರ ಒಬಿಸಿ ಮೀಸಲು ಹಕ್ಕೊತ್ತಾಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.