ಪ್ರವೇಶಾತಿಗೆ ಹಣ ಕೇಳುತ್ತಿರುವ ಕೆಲ ಶಾಲೆಗಳ ಪ್ರಾಚಾರ್ಯರ ವಿರುದ್ಧ ಕ್ರಮ ಜರುಗಿಸಿ-ಶಾಸಕ ಮಾನೆ
Aug 25 2024, 02:00 AM ISTವಿವಿಧ ಇಲಾಖೆಗಳಡಿ ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ಕೆಆರ್‌ಇಐಎಸ್ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ರೋಸ್ಟರ್ ಪ್ರಕಾರ ಪ್ರವೇಶಾತಿಗೆ ಅವಕಾಶ ಕಲ್ಪಿಸಬೇಕು. ಕೆಲ ಶಾಲೆಗಳ ಪ್ರಾಚಾರ್ಯರು ಪ್ರವೇಶಾತಿಗೆ ಹಣ ಕೇಳುತ್ತಿರುವ ದೂರುಗಳಿದ್ದು, ಪರಿಶೀಲಿಸಿ ಕ್ರಮ ಜರುಗಿಸಿ ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.