ಶಾಸಕ ಮುನಿರತ್ನ ಹೇಳಿಕೆಗೆ ಲಕ್ಷ್ಮಣ್ ಖಂಡನೆ
Sep 17 2024, 12:54 AM ISTಮುನಿರತ್ನ ಅವರು ಮನಸೋ ಇಚ್ಛೆ ಬಹಳಷ್ಟು ಹಗುರವಾಗಿ ಮಾತನಾಡಿದ್ದು, ಇವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹ ಪಡಿಸುತ್ತೇವೆ. ಇವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದರ ಜೊತೆಗೆ ಇವರು ಸಾರ್ವಜನಿಕವಾಗಿ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡದಂತೆ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇಂತಹ ಕೀಳು ನಡವಳಿಕೆಯಿಂದ ಹೊರಬದದಿದ್ದರೆ ಇವರ ವಿರುದ್ಧ ರಾಜ್ಯಾಂದ್ಯಂತ ತೀವ್ರವಾಗಿ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಎಚ್ಚರಿಸಿದರು.