ಮಕ್ಕಳ ಮೇಲೆ ಒತ್ತಡ ಹೇರಬೇಡಿ ಶಾಸಕ ಗಣೇಶ್‌ ಪ್ರಸಾದ್‌

Jan 19 2024, 01:45 AM IST
ಗುಂಡ್ಲುಪೇಟೆಬೇಗೂರು ಗ್ರಾಮದ ಲಿಟಲ್‌ ಫ್ಲವರ್‌ ಶಾಲೆಗೆ ನನ್ನ ತಂದೆ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅಡಿಗಲ್ಲು ಹಾಕಿದ್ದರು ಆದರೀಗ ನಾನು ಶಾಲೆಯ ಬೆಳ್ಳಿ ಮಹೋತ್ಸವ ಉದ್ಘಾಟಿಸುತ್ತಿರುವುದು ಖುಷಿಯ ವಿಚಾರ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ತಾಲೂಕಿನ ಬೇಗೂರು ಲಿಟಲ್‌ ಫ್ಲವರ್‌ ಶಾಲೆಯ ಬೆಳ್ಳಿ ಮಹೋತ್ಸವ ಸಮಾರಂಭ ಉದ್ಘಾಟಿಸಿ ಶಾಲೆಯ ಆರಂಭದಿಂದ ಇಲ್ಲಿಯ ತನಕ ನನ್ನ ಕುಟುಂಬ ಈ ಸಂಸ್ಥೆಗೆ ಸಹಕಾರ ನೀಡುತ್ತ ಬಂದಿದೆ ನನ್ನ ಸಹಕಾರ ಸದಾ ಇರಲಿದೆ ಎಂದರು. ಮಹದೇವಪ್ರಸಾದ್‌ ಟ್ರಸ್ಟ್‌ ಹಾಗೂ ಸಂಗಮ ಪ್ರತಿಷ್ಠಾನದಿಂದ ಕ್ಷೇತ್ರದ ಮಕ್ಕಳ ಉದ್ಯೋಗ ಸಿಗಬೇಕು ಎಂಬ ಕಾಳಜಿಯಿಂದ ತರಬೇತಿ ಹಾಗೂ ಕಾರ್ಯಾಗಾರ ನಡೆಸುತ್ತಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.